Monday, August 19, 2013

‎ನನ್ನೆಲ್ಲ‬ ಆತ್ಮೀಯರಿಗೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಹಿಂದಿನ ದಿನವೇ ಭಾರಿ ಖುಷಿ ,ನಾಳೆ ಸ್ವಾತಂತ್ರ್ಯ ದಿನಾಚರಣೆಯ ಹೆಸರಲ್ಲಿ ಸಿಹಿತಿಂಡಿಗಳ ಸಂಭ್ರಮ. ಹಾಗೆ ಮಧ್ಯಾಹ್ನ ರಜೆ ,ಜೂನ್ ತಿಂಗಳಲ್ಲಿ ಶಾಲೆ ಪ್ರಾರಂಭವಾದರೆ ಅಗಸ್ಟ್ 15ರ ತನಕ ಯಾವುದೇ ರಜಾದಿನಗಳು ಇರುವುದಿಲ್ಲ , ಕೆಲವೊಮ್ಮೆ ಜೋರುಮಳೆಗೆ ಶಾಲೆಯ ಸ್ಥಳಿಯರಜೆ ಇರುತ್ತದೆ , ನಾವೇ ಸೃಷ್ಟಿಸಿದ ರಜೆ ಅಂದರೆ ಮಳೆ ಜೋರು ಬಂದಾಗ , ಸರಿಯಿದ್ದ ಕಾಲುಸಂಕ ನಮ್ಮ ಸುಳ್ಳು ನೆಪಕ್ಕೆ ಬಲಿಯಾಗಿ ರಜಾ ಮಾಡುವುದು ಊಂಟು . ಅಗಸ್ಟ್ 15ರ ಬೆಳಿಗ್ಗೆ ಈ ಪ್ರತಿದಿನಕ್ಕಿಂತ ಬೇಗನೆ ಎಳುತ್ತಿದ್ದೆವು . ಮನೆಯ ಅಕ್ಕಪಕ್ಕದಲ್ಲಿರುವ ಎಲ್ಲಾ ಕೈಗೆ ಸಿಕ್ಕಿದ ಹೂಗಳನ್ನು ಕೊಯ್ಥ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿಕೊಂಡು , ನಿನ್ನೆ ರಾತ್ರಿಯೆ ಇಸ್ತ್ರಿ ಮಾಡಿಸಿಟ್ಟಿದ ಬಿಳಿ ಅಂಗಿ , ನೀಲಿ ಚಡ್ಡಿ / ಪ್ಯಾಂಟ್ ,ನೀಲಿ ಟೈ . ಅಂಗಿ ಚಡ್ಡಿಗಳಿಗೆ ಇಸ್ತ್ರಿಯ ಬಿಸಿ ಮುಟ್ಟಬೇಕೆಂದರೆ ಅಗಸ್ಟ್ 15 ಬರಬೇಕು .ಇಡಿ ದೇಶವೇ ಖುಷಿಯಲ್ಲಿದೆ ಅದರೊಂದಿಗೆ ನಮ್ಮದೊಂದು ಅಷ್ಟೆ ಯಾಕೇ ಏನು ಗೊತ್ತಿಲ್ಲ . ಹೇಳಿದ್ದರು ಅರ್ಥಮಾಡಿಕೊಳ್ಳುವ ಜ್ಝಾನ ನಮ್ಮಲ್ಲಿರಲಿಲ್ಲ . 7ನೇ ತರಗತಿಯ ತನಕ ಚಡ್ಠಿ ಅನಂತರ ಪ್ಯಾಂಟ್ ನ ಯುಗ . ಹಾಗೆ ಒಂದು ನೀಲಿ ಟೈ ತೊಟ್ಟುಕೊಂಡು ಶಾಲೆಗೆ ಓಡುವ ಕಾತುರ . ತಿಂಡಿ ಕೂಡ ಗಡಿ ಬಿಡಿಯಲ್ಲಯೇ ಮುಕ್ಕಿ ಶಾಲೆ ತಲುಪುವ ತವಕ . ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಗಳಲ್ಲಿ ಹದಿನೈದು ದಿನಗಳ ಮೊದಲೇ ಪೂರ್ವ ತಯಾರಿ ನಡೆದಿರುತಿತ್ತು . ಯಾವ ನಾಟಕ , ಯಾರ ಯಾರ ಭಾಷಣ , ಯಾರು ಅಭ್ಯಾಗತರು ಎಂಬುದು .ಸಾಂಸ್ಕ್ರತಿಕ ಕಾರ್ಯಕ್ರಮ ಎಂದರೆ ನಾನೆಂತು ಸಣ್ಣ ಮಟ್ಟದಲ್ಲಾದರು ಭಾಗವಹಿಸುತ್ತಿದೆ . ಸ್ವಾತಂತ್ರ್ಯ ದಿನಾಚರಣೆಯ ದಿನ ಬೇಗ ನಾವೆಲ್ಲ ಶಾಲೆಗೆ ಬಂದು ಕೆಲವರು ಶಾಲಾವರಣದ ಕಸ ತಗೆಯುತ್ತಿದ್ದೆವು ,ಅಡಿಕೆ ಮರ ಹತ್ತಿ ಅಭ್ಯಾಸ ಇರುವವ ದ್ವಜಸ್ತಂಭ ಹತ್ತಿ ದ್ವಜಕಟ್ಟುತಿದ್ದ . ಕೆಲವರು ಭಾಷಣ , ನಾಟಕದ ಪೂರ್ವ ತಯಾರಿ ,ಭಾಷಣ ಎಂದರೆ ಯಾರಾದರೂ ಅಣ್ಣಂದಿರು ,ಶಿಕ್ಷಕರು ಬರೆದು ಕೊಟ್ಟ ಸಾಲುಗಳನ್ನು ನೋಡಿಕೊಂಡು ಹೇಳುವುದೆ ಸಾಹಸ , ಅದೇ ಸಾಧನೆ . ನನ್ನಗಿನ್ನು ನೆನಪಿದೆ 3ನೇ ತರಗತಿಯಲ್ಲಿ ಇರುವಾಗ ಅಗಸ್ಟ್ 15ರಂದು ನಮ್ಮೂರಿನ ಶಾಲೆಯಲ್ಲಿ ಪಟಪಟನೆ ಭಾಷಣ ಓದಿದೆ ಅಷ್ಟೆ . ಊರವರ ಮನಸ್ಸಲ್ಲಿ ಅದ್ಯಾವ ಮೋಡಿಮಾಡಿತೋ ತಿಳಿಯದೋ , ಭಾರಿ ಹೊಗಳಿಕೆ ಬಂದಿತಂತು ಸುಳ್ಳಲ್ಲ ಕೇವಲ ಓದಿದಕ್ಕೆ . ಮಹನೀಯರೊಬ್ಬರು ಬಾವುಟವನ್ನು ದ್ವಜಸ್ಥಂಭದ ಉತ್ತುಂಗಕ್ಕೆ ಹಾರಿಸಿ ಭಾಷಣ ಬಿಗಿಯುತ್ತಿದ್ದರು ವರ್ಷಂಪ್ರತಿಯು ಇದೆ ಪರಿಪಾಟ , ಈಗಲೂ ಇದೇ . ನಂತರ ಒಂದಿಷ್ಟೂ ದೂರದವರೆಗೆ ಭಾರತಾಂಬೆಯನ್ನ ನೆನೆಯುತ್ತಿದ್ದವು , ಸ್ವಾತಂತ್ರ್ಯ ವೀರರಿಗೆ ಜೈಘೋಷ ಹಾಕುತ್ತಿದ್ದೆವು , ಹಾಕುತ್ತಿದ್ದೇವೆ . ಆ ದಿನ ಹೊರತುಪಡಿಸಿ ಬೇರೆ ದಿನ ಆ ವೀರರ ಹೆಸರುಗಳು ಯಾರ ಬಾಯಿಂದಲೂ ಕೇಳಿದ ನೆನಪಿಲ್ಲ . ಹಾಗೆ ದಾರಿಮದ್ಯೆ ನಮ್ಮ ಬಹುನಿರೀಕ್ಷೆಯ ಚಾಕ್ ಲೇಟ್ , ಲಾಡು ಅದು ಕೈತುಂಬ , ಅನಂತರ ಸಾಂಸ್ಕ್ರತಿತ ಕಾರ್ಯಕ್ರಮಗಳು . ನಾಟಕಗಳು , ದೇಶಭಕ್ತಿಗೀತೆಗಳು ,ಭಾಷಣಗಳು , ಎಲ್ಲರ ಭಾಷಣಗಳಲ್ಲು ಗಾಂದೀಜಿ , ನೆಹರುಗಳಿಂದ ಪ್ರಾರಂಭಿಸಿದ ವೀರಾಧಿವೀರರ ಹೆಸರು , ಅವರು ತಂದು ಕೊಟ್ಟಿದ್ದಾರೆ -ನಾವು ಉಳಿಸಿಕೊಳ್ಳಬೇಕು ಎಂಬಿಷ್ಟೆ ಅರ್ಥದ ಕಂಠಪಾಟವಾಗಿರುವ ವಾಕರಿಕೆಯ ವಾಕ್ಯಗಳು . ಆ ಎರಡು ಹೆಸರು ಅದೇನು ಮೋ(ಸ)ಡಿ ಮಾಡಿತ್ತೊ ತಿಳಿಯದು ಸ್ವಾಂತಂತ್ರ್ಯ ದಿನಾಚರಣೆ ಅಂದಾಗ ಆ ಹೆಸರೆ ಬಹಳ ಖೇದನೀಯವಾಗಿ ಮೊದಲ ಸಾಲಿನಲ್ಲಿ ನಿಂತಿದೆ . ಅಸಲಿಗೆ ಅವರಿಬ್ಬರು ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ , ಸ್ವಾರ್ಥದ ಹೋರಾಟಗಾರರಾಗಿದ್ದರು ಎಂಬ ನಿಜಾಂಶ ಮಾತ್ರ ತಿಳಿದವರು ವಿರಳ .ಹಾಗಾಗಿ ಮೊನ್ನೆ ಒಂದಿಬ್ಬರಿಗೆ ಭಾಷಣ ಸಿದ್ದಪಡಿಸಿಕೊಡುವಾಗ ಅವರಿಬ್ಬರನ್ನು ಪಾರಂಪರಿಕ ಪಟ್ಟಿಯಿಂದ ಉಚ್ಚಾಟಿಸಿದೆ . ಒಂದಿಬ್ಬರನ್ನು ಸ್ಮರಿಸಿ ಸಿಹಿಹಂಚಿ ಖುಷಿಪಡುತ್ತೇವೆ ನಿಜವಾದ ಸ್ವಾತಂತ್ರ್ಯ ನಾವು ಪಡೆದಿಲ್ಲ , ನಿಜವಾದ ಹೋರಾಟಗಾರರು ಪ್ರಚಾರಪಡೆದಿಲ್ಲ ಎಂಬುದು ಕಹಿಸತ್ಯ . ಇಂತಹ ಭಾಷಣ , ನಾಟಕನೋಡಿದ ನಂತರ ನಮಗೆ ಮನಗೆ ಓಡುವ ಖುಷಿ , ಮದ್ಯಾಹ್ನ ಆಡುವ ಸ್ವಾತಂತ್ರ್ಯ . ಭಾಲ್ಯದಲ್ಲಿ ನಮಗಿರುವ ಸ್ವಾತಂತ್ರ್ಯ ಅಂದರೆ ಶಾಲೆಯಿಂದ ಮನೆಗೆ ಹೋಗಿಬರುವುದು ಅಷ್ಟೆ . ಆದರೆ ಇಂದು ಬೇರೆಯಾದ ಅರ್ಥ ಪಡೆಯುತ್ತಿದೆ , ನಿಜವಾದ ಇತಿಹಾಸವನ್ನು ಬೂದಿಮುಚ್ಚಿರುವಂತೆ ಸ್ವಾತಂತ್ರ್ಯ ಕೂಡ ಅದೇ ಪಥದಲ್ಲಿದೆ . ಈ ಆಚರಣೆಯ ಸ್ವಾತಂತ್ರ ದಿನದಲ್ಲಿ ಭಾಲ್ಯದ ದಿನಗಳು , ಮಾಡಿದ ಭಾಷಣ , ನಾಟಕಗಳು , ಅದರೊಂದಿಗೆ ಗೆಳೆಯರು ,ಸಿಹಿತಿಂಡಿ ಹಂಚಿದ ಹಿರಿಯರು , ಕಾರ್ಯಕ್ರಮ ಅಯೋಜಿಸುವ ಶಿಕ್ಷಕರುಗಳು , ಪ್ರೌಡಶಾಲೆಯ ತನಕ ಆಚರಿಸಿದ ಸ್ವತಂತ್ರದಿನಾಚರಣೆಯಲ್ಲಿ ಎಲ್ಲರನ್ನು ಸ್ಮರಿಸುವ , ಚಿಕ್ಕ ಪ್ರಯತ್ನ ಮಾಡಿದೆ ಅಷ್ಟೆ .ಇದರಲ್ಲಿ ತುಂಬ ಆತ್ಮೀಯರು ಈ ಸಾಮಾಜಿಕ ತಾಣದಲ್ಲಿ ಇದ್ದಾರೆ ಹಾಗಾಗಿ ಅವರೊಂದಿಗೆ ಸುಮಧುರ ಭಾಲ್ಯದ ಸಿಹಿಕ್ಷಣಗಳು ಹಂಚಿಕೊಳ್ಳುವ ಆಸೆಯಾಯಿತು . ‪#‎ನನ್ನೆಲ್ಲ‬ ಆತ್ಮೀಯರಿಗೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಬೋಸ್ ,ಭಗತ್ , ರಾಜಗುರು , ಸುಖದೇವ್ , ಅಜಾದ್ , ಶಾಸ್ತ್ರಿ ರಂತಹ ವೀರನಾಯಕರನ್ನು ಸ್ಮರಿಸೋಣ . ಜೈಹಿಂದ್