Monday, August 19, 2013
ನನ್ನೆಲ್ಲ ಆತ್ಮೀಯರಿಗೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಹಿಂದಿನ ದಿನವೇ ಭಾರಿ ಖುಷಿ ,ನಾಳೆ ಸ್ವಾತಂತ್ರ್ಯ ದಿನಾಚರಣೆಯ ಹೆಸರಲ್ಲಿ ಸಿಹಿತಿಂಡಿಗಳ ಸಂಭ್ರಮ. ಹಾಗೆ ಮಧ್ಯಾಹ್ನ ರಜೆ ,ಜೂನ್ ತಿಂಗಳಲ್ಲಿ ಶಾಲೆ ಪ್ರಾರಂಭವಾದರೆ ಅಗಸ್ಟ್ 15ರ ತನಕ ಯಾವುದೇ ರಜಾದಿನಗಳು ಇರುವುದಿಲ್ಲ , ಕೆಲವೊಮ್ಮೆ ಜೋರುಮಳೆಗೆ ಶಾಲೆಯ ಸ್ಥಳಿಯರಜೆ ಇರುತ್ತದೆ , ನಾವೇ ಸೃಷ್ಟಿಸಿದ ರಜೆ ಅಂದರೆ ಮಳೆ ಜೋರು ಬಂದಾಗ , ಸರಿಯಿದ್ದ ಕಾಲುಸಂಕ ನಮ್ಮ ಸುಳ್ಳು ನೆಪಕ್ಕೆ ಬಲಿಯಾಗಿ ರಜಾ ಮಾಡುವುದು ಊಂಟು . ಅಗಸ್ಟ್ 15ರ ಬೆಳಿಗ್ಗೆ ಈ ಪ್ರತಿದಿನಕ್ಕಿಂತ ಬೇಗನೆ ಎಳುತ್ತಿದ್ದೆವು .
ಮನೆಯ ಅಕ್ಕಪಕ್ಕದಲ್ಲಿರುವ ಎಲ್ಲಾ ಕೈಗೆ ಸಿಕ್ಕಿದ ಹೂಗಳನ್ನು ಕೊಯ್ಥ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿಕೊಂಡು , ನಿನ್ನೆ ರಾತ್ರಿಯೆ ಇಸ್ತ್ರಿ ಮಾಡಿಸಿಟ್ಟಿದ ಬಿಳಿ ಅಂಗಿ , ನೀಲಿ ಚಡ್ಡಿ / ಪ್ಯಾಂಟ್ ,ನೀಲಿ ಟೈ . ಅಂಗಿ ಚಡ್ಡಿಗಳಿಗೆ ಇಸ್ತ್ರಿಯ ಬಿಸಿ ಮುಟ್ಟಬೇಕೆಂದರೆ ಅಗಸ್ಟ್ 15 ಬರಬೇಕು .ಇಡಿ ದೇಶವೇ ಖುಷಿಯಲ್ಲಿದೆ ಅದರೊಂದಿಗೆ ನಮ್ಮದೊಂದು ಅಷ್ಟೆ ಯಾಕೇ ಏನು ಗೊತ್ತಿಲ್ಲ . ಹೇಳಿದ್ದರು ಅರ್ಥಮಾಡಿಕೊಳ್ಳುವ ಜ್ಝಾನ ನಮ್ಮಲ್ಲಿರಲಿಲ್ಲ . 7ನೇ ತರಗತಿಯ ತನಕ ಚಡ್ಠಿ ಅನಂತರ ಪ್ಯಾಂಟ್ ನ ಯುಗ . ಹಾಗೆ ಒಂದು ನೀಲಿ ಟೈ ತೊಟ್ಟುಕೊಂಡು ಶಾಲೆಗೆ ಓಡುವ ಕಾತುರ . ತಿಂಡಿ ಕೂಡ ಗಡಿ ಬಿಡಿಯಲ್ಲಯೇ ಮುಕ್ಕಿ ಶಾಲೆ ತಲುಪುವ ತವಕ .
ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಗಳಲ್ಲಿ ಹದಿನೈದು ದಿನಗಳ ಮೊದಲೇ ಪೂರ್ವ ತಯಾರಿ ನಡೆದಿರುತಿತ್ತು . ಯಾವ ನಾಟಕ , ಯಾರ ಯಾರ ಭಾಷಣ , ಯಾರು ಅಭ್ಯಾಗತರು ಎಂಬುದು .ಸಾಂಸ್ಕ್ರತಿಕ ಕಾರ್ಯಕ್ರಮ ಎಂದರೆ ನಾನೆಂತು ಸಣ್ಣ ಮಟ್ಟದಲ್ಲಾದರು ಭಾಗವಹಿಸುತ್ತಿದೆ . ಸ್ವಾತಂತ್ರ್ಯ ದಿನಾಚರಣೆಯ ದಿನ ಬೇಗ ನಾವೆಲ್ಲ ಶಾಲೆಗೆ ಬಂದು ಕೆಲವರು ಶಾಲಾವರಣದ ಕಸ ತಗೆಯುತ್ತಿದ್ದೆವು ,ಅಡಿಕೆ ಮರ ಹತ್ತಿ ಅಭ್ಯಾಸ ಇರುವವ ದ್ವಜಸ್ತಂಭ ಹತ್ತಿ ದ್ವಜಕಟ್ಟುತಿದ್ದ . ಕೆಲವರು ಭಾಷಣ , ನಾಟಕದ ಪೂರ್ವ ತಯಾರಿ ,ಭಾಷಣ ಎಂದರೆ ಯಾರಾದರೂ ಅಣ್ಣಂದಿರು ,ಶಿಕ್ಷಕರು ಬರೆದು ಕೊಟ್ಟ ಸಾಲುಗಳನ್ನು ನೋಡಿಕೊಂಡು ಹೇಳುವುದೆ ಸಾಹಸ , ಅದೇ ಸಾಧನೆ . ನನ್ನಗಿನ್ನು ನೆನಪಿದೆ 3ನೇ ತರಗತಿಯಲ್ಲಿ ಇರುವಾಗ ಅಗಸ್ಟ್ 15ರಂದು ನಮ್ಮೂರಿನ ಶಾಲೆಯಲ್ಲಿ ಪಟಪಟನೆ ಭಾಷಣ ಓದಿದೆ ಅಷ್ಟೆ . ಊರವರ ಮನಸ್ಸಲ್ಲಿ ಅದ್ಯಾವ ಮೋಡಿಮಾಡಿತೋ ತಿಳಿಯದೋ , ಭಾರಿ ಹೊಗಳಿಕೆ ಬಂದಿತಂತು ಸುಳ್ಳಲ್ಲ ಕೇವಲ ಓದಿದಕ್ಕೆ .
ಮಹನೀಯರೊಬ್ಬರು ಬಾವುಟವನ್ನು ದ್ವಜಸ್ಥಂಭದ ಉತ್ತುಂಗಕ್ಕೆ ಹಾರಿಸಿ ಭಾಷಣ ಬಿಗಿಯುತ್ತಿದ್ದರು ವರ್ಷಂಪ್ರತಿಯು ಇದೆ ಪರಿಪಾಟ , ಈಗಲೂ ಇದೇ . ನಂತರ ಒಂದಿಷ್ಟೂ ದೂರದವರೆಗೆ ಭಾರತಾಂಬೆಯನ್ನ ನೆನೆಯುತ್ತಿದ್ದವು , ಸ್ವಾತಂತ್ರ್ಯ ವೀರರಿಗೆ ಜೈಘೋಷ ಹಾಕುತ್ತಿದ್ದೆವು , ಹಾಕುತ್ತಿದ್ದೇವೆ . ಆ ದಿನ ಹೊರತುಪಡಿಸಿ ಬೇರೆ ದಿನ ಆ ವೀರರ ಹೆಸರುಗಳು ಯಾರ ಬಾಯಿಂದಲೂ ಕೇಳಿದ ನೆನಪಿಲ್ಲ . ಹಾಗೆ ದಾರಿಮದ್ಯೆ ನಮ್ಮ ಬಹುನಿರೀಕ್ಷೆಯ ಚಾಕ್ ಲೇಟ್ , ಲಾಡು ಅದು ಕೈತುಂಬ , ಅನಂತರ ಸಾಂಸ್ಕ್ರತಿತ ಕಾರ್ಯಕ್ರಮಗಳು . ನಾಟಕಗಳು , ದೇಶಭಕ್ತಿಗೀತೆಗಳು ,ಭಾಷಣಗಳು , ಎಲ್ಲರ ಭಾಷಣಗಳಲ್ಲು ಗಾಂದೀಜಿ , ನೆಹರುಗಳಿಂದ ಪ್ರಾರಂಭಿಸಿದ ವೀರಾಧಿವೀರರ ಹೆಸರು , ಅವರು ತಂದು ಕೊಟ್ಟಿದ್ದಾರೆ -ನಾವು ಉಳಿಸಿಕೊಳ್ಳಬೇಕು ಎಂಬಿಷ್ಟೆ ಅರ್ಥದ ಕಂಠಪಾಟವಾಗಿರುವ ವಾಕರಿಕೆಯ ವಾಕ್ಯಗಳು .
ಆ ಎರಡು ಹೆಸರು ಅದೇನು ಮೋ(ಸ)ಡಿ ಮಾಡಿತ್ತೊ ತಿಳಿಯದು ಸ್ವಾಂತಂತ್ರ್ಯ ದಿನಾಚರಣೆ ಅಂದಾಗ ಆ ಹೆಸರೆ ಬಹಳ ಖೇದನೀಯವಾಗಿ ಮೊದಲ ಸಾಲಿನಲ್ಲಿ ನಿಂತಿದೆ . ಅಸಲಿಗೆ ಅವರಿಬ್ಬರು ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ , ಸ್ವಾರ್ಥದ ಹೋರಾಟಗಾರರಾಗಿದ್ದರು ಎಂಬ ನಿಜಾಂಶ ಮಾತ್ರ ತಿಳಿದವರು ವಿರಳ .ಹಾಗಾಗಿ ಮೊನ್ನೆ ಒಂದಿಬ್ಬರಿಗೆ ಭಾಷಣ ಸಿದ್ದಪಡಿಸಿಕೊಡುವಾಗ ಅವರಿಬ್ಬರನ್ನು ಪಾರಂಪರಿಕ ಪಟ್ಟಿಯಿಂದ ಉಚ್ಚಾಟಿಸಿದೆ . ಒಂದಿಬ್ಬರನ್ನು ಸ್ಮರಿಸಿ ಸಿಹಿಹಂಚಿ ಖುಷಿಪಡುತ್ತೇವೆ ನಿಜವಾದ ಸ್ವಾತಂತ್ರ್ಯ ನಾವು ಪಡೆದಿಲ್ಲ , ನಿಜವಾದ ಹೋರಾಟಗಾರರು ಪ್ರಚಾರಪಡೆದಿಲ್ಲ ಎಂಬುದು ಕಹಿಸತ್ಯ . ಇಂತಹ ಭಾಷಣ , ನಾಟಕನೋಡಿದ ನಂತರ ನಮಗೆ ಮನಗೆ ಓಡುವ ಖುಷಿ , ಮದ್ಯಾಹ್ನ ಆಡುವ ಸ್ವಾತಂತ್ರ್ಯ .
ಭಾಲ್ಯದಲ್ಲಿ ನಮಗಿರುವ ಸ್ವಾತಂತ್ರ್ಯ ಅಂದರೆ ಶಾಲೆಯಿಂದ ಮನೆಗೆ ಹೋಗಿಬರುವುದು ಅಷ್ಟೆ . ಆದರೆ ಇಂದು ಬೇರೆಯಾದ ಅರ್ಥ ಪಡೆಯುತ್ತಿದೆ , ನಿಜವಾದ ಇತಿಹಾಸವನ್ನು ಬೂದಿಮುಚ್ಚಿರುವಂತೆ ಸ್ವಾತಂತ್ರ್ಯ ಕೂಡ ಅದೇ ಪಥದಲ್ಲಿದೆ .
ಈ ಆಚರಣೆಯ ಸ್ವಾತಂತ್ರ ದಿನದಲ್ಲಿ ಭಾಲ್ಯದ ದಿನಗಳು , ಮಾಡಿದ ಭಾಷಣ , ನಾಟಕಗಳು , ಅದರೊಂದಿಗೆ ಗೆಳೆಯರು ,ಸಿಹಿತಿಂಡಿ ಹಂಚಿದ ಹಿರಿಯರು , ಕಾರ್ಯಕ್ರಮ ಅಯೋಜಿಸುವ ಶಿಕ್ಷಕರುಗಳು , ಪ್ರೌಡಶಾಲೆಯ ತನಕ ಆಚರಿಸಿದ ಸ್ವತಂತ್ರದಿನಾಚರಣೆಯಲ್ಲಿ ಎಲ್ಲರನ್ನು ಸ್ಮರಿಸುವ , ಚಿಕ್ಕ ಪ್ರಯತ್ನ ಮಾಡಿದೆ ಅಷ್ಟೆ .ಇದರಲ್ಲಿ ತುಂಬ ಆತ್ಮೀಯರು ಈ ಸಾಮಾಜಿಕ ತಾಣದಲ್ಲಿ ಇದ್ದಾರೆ ಹಾಗಾಗಿ ಅವರೊಂದಿಗೆ ಸುಮಧುರ ಭಾಲ್ಯದ ಸಿಹಿಕ್ಷಣಗಳು ಹಂಚಿಕೊಳ್ಳುವ ಆಸೆಯಾಯಿತು .
#ನನ್ನೆಲ್ಲ ಆತ್ಮೀಯರಿಗೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಬೋಸ್ ,ಭಗತ್ , ರಾಜಗುರು , ಸುಖದೇವ್ , ಅಜಾದ್ , ಶಾಸ್ತ್ರಿ ರಂತಹ ವೀರನಾಯಕರನ್ನು ಸ್ಮರಿಸೋಣ .
ಜೈಹಿಂದ್
Tuesday, January 1, 2013
"ಹೊಸ ವರ್ಷದ ಪ್ರೀತಿಪೂರ್ವಕ ಶುಭಾಶಯಗಳು"
ಹೊಸ ವರ್ಷ ಹೊಸ ಕನಸು ಸರಿ.....
ಹಾಗೆ
ನನಸಾಗದೆ ಉಳಿದ
ಹಳೆಯ ಕನಸುಗಳಿಗೆ ಹೊಸ ಯೋಜನೆಗಳಿರಲಿ.......
ಶುಭಕಾಮನೆಗಳು.
"ಹೊಸ ವರ್ಷದ ಪ್ರೀತಿಪೂರ್ವಕ ಶುಭಾಶಯಗಳು"
Subscribe to:
Comments (Atom)