Wednesday, December 19, 2012

ಚೊಚ್ಚಲ ಸಂಭ್ರಮ -- ಒಂದು ಖುಷಿ . ಯಾರ ಯಾರದೋ ಮಗುವನ್ನು ಆಡಿಸಿ ಖುಷಿಪಟ್ಟ ಜೀವಕ್ಕೆ ಒಡಲು ತುಂಬಿದ ಸಂಭ್ರಮ . ಯಾರೋ ಗೀಚಿದನ್ನು ಓದುತಿದ್ದ ಮನಸ್ಸಿಗೆ ಗೀಚುವ ಖುಷಿ. ಇದು ನನ್ನ ಬರಹದ ಬಗ್ಗೆ ಹೇಳುತಿದ್ದೇನೆ . ಗೋಲಿ ಬಜೆ ಕಟ್ಟಿಕೊಟ್ಟ ಪೇಪರಲ್ಲಿದ್ಧನ್ನು ಬಿಡಿಸಿ ಓದುತಿದ್ದವನಿಗೆ , ಓದು ಪುಸ್ತಕ ,ಬರಹ ಪಂಚಪ್ರಾಣ . 5ನೇ ತರಗತಿಯಿಂದ ಜೊತೆಯಾಗಿಯೇ ಇದೆ . ಗೀಚಿದ್ದು , ಸಿಕ್ಕಿದ್ದು , ಹರಿದದ್ದು , ರದ್ದಿ , ಯಾವುದನ್ನೂ ಬಿಟ್ಟಿಲ್ಲ ಯಾಕೋ ಗೊತ್ತಿಲ್ಲ . ಅಲ್ಲಿ -ಇಲ್ಲಿ ಗೀಚಿ ತುಂಬಿಸಿದ ಹಾಳೆಗಳು ದೂಳು ತುಂಬಿದೆ . ಇಲ್ಲೊಂದಿಷ್ಟು ಗೀಚುವ ಮನಸ್ಸಾಯಿತು . ತಪ್ಪೊ ಸರಿಯೋ ಗೀಚುವ ಮನಸ್ಸಿದೆ . ತಪ್ಪೆ ಬರೆದರೂ ತಿದ್ದುವ ಕೆಲವು ಹಿರಿಯರಿದ್ದಾರೆ ಎನ್ನುವ ನಂಬಿಕೆ . ಆಗಾಗ ಮನಸ್ಸಿಗೆ ತೋಚಿದನ್ನು ಗೀಚುತಿರುತ್ತೇನೆ ,ಕಷ್ಟ ಆದರೂ ಸಹಿಸಿಕೊಂಡು ತಿಳಿ ಹೇಳುತ್ತಿರುವ ನಂಬಿಕೆಯಲ್ಲಿ .